ಗ್ರಾಮೀಣ ಪ್ರದೇಶದ ಯುವಜನತೆಯ ಉನ್ನತ ಶಿಕ್ಷಣದ ಅತ್ಯಗತ್ಯತೆಯನ್ನು ಅರಿತ, ಗ್ರಾಮದ ಸ್ಥಳೀಯ ಶಿಕ್ಷಣ ತಜ್ಞರು, ದಾನಿಗಳು ಶ್ರೀ ಶಾರದಾ ಕಾಲೇಜನ್ನು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದರು. ಇದರ ಹಿನ್ನೆಲೆಯಾಗಿ “ಶ್ರೀ ಶಾರದಾ ಕಾಲೇಜು ಟ್ರಸ್ಟ್’ ನ್ನು ರಚಿಸಲಾಯಿತು. 1972 ಮಾರ್ಚ್ 18ರಂದು ಇದರ ನೊಂದಣಿಯನ್ನು ಸೊಸೈಟಿ ರಿಜಿಸ್ಟ್ರೇಶನ್ ಆ್ಯಕ್ಟ್‍ನ ಪ್ರಕಾರ ಸಬ್ ರಿಜಿಸ್ಟ್ರಾರ್ ಕಛೇರಿ ಕುಂದಾಪುರದಲ್ಲಿ ಮಾಡಲಾಯಿತು.
ಈ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರಾಗಿ ಶ್ರೀ ಬಿ.ವಿ ಭಂಡಾರಿ, ಉಪಾಧ್ಯಕ್ಷರಾಗಿ ಶ್ರೀ ಎಚ್ ವಿ ಕಾಮತ್, ಟ್ರಸ್ಟಿಗಳಾಗಿ ಶ್ರೀ.ಬಿ.ವಿ ಆರ್ ಹೆಗ್ಡೆ, ಶ್ರೀ ಎಸ್ ಪಿ ತೋಳಾರ್, ಡಾ.ಎಚ್ ಶಾಂತಾರಾಮ್, ಡಾ. ಬಿ.ಬಿ ಹೆಗ್ಡೆ, ಶ್ರೀ ಬಿ.ಎಸ್ ಜಗನ್ನಾಥ ಶೆಟ್ಟಿ ಹಾಗೂ ಸದಸ್ಯರಾಗಿ ಪ್ರೋ ಎಸ್ ಶಿವರಾಮ್ ಶೆಟ್ಟಿ ಇವರುಗಳು ನೇಮಕಗೊಂಡರು.
1972-73ರಲ್ಲಿ ಕಾಲೇಜು ಪ್ರಥಮ, ದ್ವಿತೀಯ ವರ್ಷಗಳ ಕಲಾ ಮತ್ತು ವಾಣಿಜ್ಯ ವಿಷಯಗಳ ಪದವಿ ಪೂರ್ವ ತರಗತಿಗಳೊಂದಿಗೆ ಪ್ರಾರಂಭವಾಯಿತು. ಮುಂದಿನ ವರ್ಷದಲ್ಲಿ ಅಂದರೆ 1973-74ನೇ ಇಸವಿಯಲ್ಲಿ ನಮ್ಮ ಕಾಲೇಜು ಬಿ.ಎ ಮತ್ತು ಬಿ.ಕಾಂ ಪದವಿ ತರಗತಿಗಳನ್ನು ತೆರೆಯಲು ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ದೊರೆತದ್ದು ಹೆಮ್ಮೆಯ ವಿಚಾರವಾಗಿದೆ.
ಉತ್ತಮ ಧ್ಯೇಯ ಹಾಗೂ ಉದ್ದೇಶಗಳನ್ನು ಹೊಂದಿರುವ ನಮ್ಮ ವಿದ್ಯಾಸಂಸ್ಥೆಯ ನಿರ್ಮಾಣಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಪೂಜ್ಯ ಸ್ವಾಮೀಜಿಯವರು 4 ಎಕರೆ ಭೂಮಿಯನ್ನು ದಾನವಾಗಿ ನೀಡಿರುತ್ತಾರೆ. ಇವರ ಜೊತೆಗೆ ಶ್ರೀ ಬಿ ವಿ ಆರ್ ಹೆಗ್ಡೆ, ಶ್ರೀ ರಾಮಕೃಷ್ಣಯ್ಯ ಅವರು ಕೂಡ ಜಾಗವನ್ನು ಕಾಲೇಜಿನ ರಚನೆ ಸ್ಥಾಪನೆಗೆ ನೀಡಿರುತ್ತಾರೆ. ಹೀಗೆ ಸ್ಥಾಪನೆಗೆ ನೀಡಿರುತ್ತಾರೆ. ಹೀಗೆ ಸ್ಥಾಪನೆಗೊಂಡ ಕಾಲೇಜನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ಮಾಡಿದ್ದರು.
ಪದವಿ ಪೂರ್ವ ಕಾಲೇಜು ಸ್ಥಾಪನೆಯಾದ ವರ್ಷವೇ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದ್ದು, ಪದವಿ ಕಾಲೇಜು ಮೂರು ವರ್ಷಗಳ ನಂತರ ಅಂದರೆ 1976-77ರಲ್ಲಿ ಮಾನ್ಯತೆಯನ್ನು ಪಡೆದಿದೆ. ಪ್ರೋ.ಎಸ್.ಎಸ್ ಶಿವರಾಮ ಶೆಟ್ಟಿ ಇವರು ಸ್ಥಾಪಕ ಪ್ರಾಂಶುಪಾಲರಾಗಿದ್ದರು. 1979-80ರಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಸಮ್ಮಿಶ್ರಗೊಂಡವು. ಅಲ್ಲದೇ 1988-89ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಖಾಯಂ ಮಾನ್ಯತೆ ಪಡೆದುಕೊಂಡಿತು.
1996-97ರಲ್ಲಿ ಕಾಲೇಜು “ಬೆಳ್ಳಿ ಹಬ್ಬ”ವನ್ನು ಆಚರಿಸಿತು. 2004ರಲ್ಲಿ ‘ನ್ಯಾಕ್ ಟೀಮ್’ ನಮ್ಮ ಕಾಲೇಜನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಲ್ಲದೇ ಬಿ+ ಗ್ರೇಡ್‍ನ್ನು ನೀಡಿದೆ. ಮತ್ತೆ 2010ರಲ್ಲಿ ಎರಡನೇ ಬಾರಿ,2016ರಲ್ಲಿ ಮೂರನೇ ಬಾರಿ ಹಾಗೂ 2023 ರಲ್ಲಿ ನಾಲ್ಕನೇ ಬಾರಿಗೆ ‘ನ್ಯಾಕ್ ಟೀಮ್’ ಕಾಲೇಜನ್ನು ಭೇಟಿ ನೀಡಿ ಬಿ++ ಗ್ರೇಡ್‍ನ್ನು ನೀಡಿದೆ..
ಕಾಲೇಜಿನಲ್ಲಿ ಪ್ರತಿವರ್ಷವೂ ನೈತಿಕ ಹಾಗೂ ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ರಾಮಕೃಷ್ಣ ಮಠದಿಂದ ಸ್ವಾಮೀಜಿಗಳು ಬಂದು ನೈತಿಕ ಹಾಗೂ ಸಂಸ್ಕಾರಯುತ ವಾತಾವರಣವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಾರೆ.
2008-09ರಲ್ಲಿ ನಾಲ್ಕು ಸರ್ಟಿಫಿಕೆಟ್ ಕೋರ್ಸ್‍ಗಳನ್ನು ಪರಿಚಯಿಸಲಾಯಿತು. ಅವುಗಳೆಂದರೆ-ಬೇಸಿಕ್ ಅಕೌಂಟೆನ್ಸಿ, ಗ್ರಾಹಕ ಹಕ್ಕು, ಯಕ್ಷಗಾನ ಹಾಗೂ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ತರಗತಿಗಳನ್ನು ಪರಿಚಯಿಸಲಾಯಿತು. ಜೊತೆಗೆ ಯೋಗ, ಎಬ್ರಾಯಿಡರಿ ಹಾಗೂ ಸಂಗೀತ ವಿಷಯಗಳಲ್ಲಿಯೂ ಸರ್ಟಿಫೀಕೆಟ್ ಕೋರ್ಸುಗಳನ್ನು ನಡೆಸಲಾಗುತ್ತಿದೆ.
ಇದರ ಜೊತೆಗೆ ಎಲ್ಲಾ ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ. ‘ಕಿಯೋನಿಕ್ಸ್ ಯುವ. ಕಾಂ ನೊಂದಿಗಿನ ಒಪ್ಪಂದದಂತೆ ‘ಡಿಪ್ಲೊಮಾ ಆ್ಯಂಡ್ ಪಿ.ಜಿ ಡಿಪ್ಲೊಮಾ ಇನ್ ಕಂಪ್ಯೂಟರ್ ಎಜುಕೇಶನ್’, ಕಂಪ್ಯೂಟರ್ ಕಿಡ್ಸ್ ತರಗತಿಗಳನ್ನು ಸಾರ್ವಜನಿಕ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಕ್ಯಾಂಪಸ್‍ನಲ್ಲಿಯೇ ನೀಡಲಾಗುತ್ತಿದೆ.
ಪ್ರಸ್ತುತ ಕಾಲೇಜಿನಲ್ಲಿರುವ ಬೋಧಕ ವೃಂದದವರಲ್ಲಿ ಇಬ್ಬರು ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.
ಓರ್ವ ಉಪನ್ಯಾಸಕ ಎಮ್.ಫಿಲ್ ಪದವಿಯನ್ನು ಹಾಗೂ ಒಟ್ಟು ಹನ್ನೆರಡು ಮಂದಿ ಉಪನ್ಯಾಸಕರು ಎನ್.ಇ.ಟಿ/ಕೆ.ಎಸ್.ಇ.ಟಿ ನಲ್ಲಿ ತೇರ್ಗಡೆಯಾಗಿರುತ್ತಾರೆ. ಎಲ್ಲಾ ವಿಭಾಗದ ಉಪನ್ಯಾಸಕರು ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ಸೆಮಿನಾರ್/ ಕಾರ್ಯಗಾರದಲ್ಲಿ ಭಾಗವಹಿರುತ್ತಾರೆ. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸಂಶೋಧನಾ ಕಾರ್ಯಯೋಜನೆಯನ್ನು ಪೂರ್ಣಗೊಳಿಸಿರುತ್ತಾರೆ. ಹಾಗೂ ಅದರೊಂದಿಗೆ ವಿದ್ಯಾರ್ಥಿಗಳ ಕೂಡ ತಮ್ಮನ್ನು ಕಿರು ಸಂಶೋಧನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಂಬಂಧಪಟ್ಟ ವಿಷಯಗಳ ಮೇಲೆ ಲೇಖನಗಳನ್ನು ಹಾಗೂ ವರದಿಗಳನ್ನು ಮಂಡಿಸಿರುತ್ತಾರೆ.
ಬೋಧಕ ವೃಂದದವರು ಹನ್ನೊಂದು ಪುಸ್ತಕಗಳನ್ನು ಮತ್ತು ಸುಮಾರು ಮೂವತ್ತು ಸಂಶೋಧನಾ ಲೇಖನಗಳಲ್ಲಿ ಜರ್ನಲ್ನಲ್ಲಿ ಪ್ರಕಟಿಸಿರುತ್ತಾರೆ.
ಕಾಲೇಜು ಸಂಘಟಿಸಿದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿಚಾರ ಸಂಕೀರಣಗಳು ಕಮ್ಮಟಗಳು
ವಿಚಾರ ಸಂಕೀರ್ಣ/ಕಮ್ಮಟ | ಸಂಪನ್ಮೂಲ ವ್ಯಕ್ತಿಗಳು |
ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ವಿಷಯ : ಪ್ರಜಾಪ್ರಭುತ್ವ, ಅಭಿವೃದ್ಧಿ ಹಾಗೂ ಅಂಚಿನ ಸಮುದಾಯಗಳು. ದಿನಾಂಕ: 2-3 ಅಕ್ಟೋಬರ್ 2009. |
1. ಪ್ರೊ ವಿ.ಕೆ ನಟರಾಜ್, ಪ್ರಾಕ್ತನ ನಿರ್ದೇಶಕರು, ಮಿಡ್ಸ್, ಚೆನ್ನೈ 2. ಪ್ರೊ.ವಲೇರಿಯನ್ ರಾಡ್ರಿಗಸ್, ಜೆ ಎನ್ ಯು ನವದೆಹಲಿ 3. ಪ್ರೊ. ಪದ್ಮಿನಿ ಸ್ವಾಮಿನಾಥನ್, ಒIಆS, ಚೆನ್ನೈ. 4. ಪ್ರೊ. ಜಯರಾಜ ಅಮೀನ್, ಚೆನ್ನೈ ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿ.ವಿ 5. ಪ್ರೊ.ರಾಜಾರಾಂ ತೋಳ್ಪಾಡಿ, ರಾಜ್ಯಶಾಸ್ತ್ರ ವಿಭಾಗ ಮಂಗಳೂರು ವಿ.ವಿ 6. ಪ್ರೊ. ಪಾರ್ಥಸಾರಧಿ ಮಂಡಲ್, ಟಾಟಾ ಇನ್ಸಿಟಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಮುಂಬಯಿ. 7. ಪ್ರೊ. ಪಿ.ಎಲ್ ಧರ್ಮ, ಮಂಗಳೂರು ವಿ.ವಿ 8. ಡಾ.ಕಲ್ಪನಾ ಕರುಣಾಕರನ್, ಐಐಟಿ ಚೆನ್ನೈ |
ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ವಿಷಯ: ಉದಾರೀಕೃತ ಭಾರತ: ರಾಜಕೀಯ, ಸಮಾಜ ಹಾಗೂ ಆರ್ಥಿಕತೆ ದಿನಾಂಕ: 19-20, ಜುಲೈ 2013. |
1. ಪ್ರೊ. ವಲೆರಿಯನ್ ರಾಡ್ರಿಗಸ್, ಜೆ.ಎನ್.ಯು ನವದೆಹಲಿ 2. ಪ್ರೊ. ಜಯರಾಜ್ ಅಮೀನ್, ರಾಜ್ಯಶಾಸ್ತ್ರ ವಿಭಾಗ ಮಂಗಳೂರು ವಿ.ವಿ 3. ಪ್ರೊ ಕೆ ನಾಗರಾಜ್, ಏಷಿಯನ್ ಕಾಲೇಜ್ ಆಫ್ ಜರ್ನಲಿಸಂ, ಚೆನ್ನೈ 4. ಪ್ರೊ. ಮುಸಾಫರ್ ಅಸಾದಿ, ಮೈಸೂರು, ವಿ.ವಿ 5. ಪ್ರೊ. ಟಿ. ಆರ್ ಚಂದ್ರಶೇಖರ, ಕನ್ನಡ ವಿ.ವಿ ಹಂಪಿ 6. ಪ್ರೊ.ರಾಜಾರಂ ತೋಳ್ಪಾಡಿ, ಮಂಗಳೂರು ವಿ.ವಿ 7. ಡಾ. ಉದಯ ಕುಮಾರ್, ಮಂಗಳೂರು ವಿ.ವಿ 8. ಶ್ರೀ ಬಾಲಕೃಷ್ಣ ಶೆಟ್ಟಿ, ಲೋಕ ಅದಾಲತ್ ಸದಸ್ಯರು, ಬೆಂಗಳೂರು 9. ಶ್ರೀ ಶಿವಸುಂದರ, ಪತ್ರಕರ್ತತರು, ಬೆಂಗಳೂರು |
ಯುಜಿಸಿ ಪ್ರಾಯೋಜಿತ ಒಂದು ದಿನದ ವಿಚಾರ ಸಂಕಿರಣ ವಿಷಯ: 21ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ದಿನಾಂಕ: ಅಗಸ್ಟ್ 8, 2014. |
1. ಡಾ.ವಿ ಚಂದ್ರಶೇಖರ ನಂಗಲಿ, ಮಾಲೂರು 2. ಡಾ. ಸಿ.ಎಸ್ ಜಯದೇವ ಚಾಮರಾಜನಗರ 3. ಡಾ. ಎಚ್.ಎನ್ ಮುರಲೀಧರ, ಆಚಾರ್ಯ ಪಾಠಶಾಲೆ, ಬೆಂಗಳೂರು. 4. ಪ್ರೊ ರಾಜಾರಾಂ ತೋಳ್ಪಾಡಿ, ಮಂಗಳೂರು ವಿ.ವಿ 5. ಶ್ರೀ ಕೆ.ಎಲ್ ಅಶೋಕ, ವಿದ್ವಾಂಸರು, ಬೆಂಗಳೂರು 6. ಸ್ವಾಮಿ ಜಿತಕಾಮಾನಂದಜಿ, ರಾಮಕೃಷ್ಣ ಮಠ, ಮಂಗಳೂರು 7. ಜೊ.ಹೊ. ನಾರಾಯಣ ಸ್ವಾಮಿ, ಹಿರಿಯ ವಿದ್ವಾಂಸರು, ಹಾಸನ. |
ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ವಿಷಯ: ಕರ್ನಾಟಕ ರಾಜಕಾರಣ: ಸಾಹಿತ್ಯಿಕ ಸಾಂಸ್ಕøತಿಕ ಗ್ರಹಿಕೆಗಳು ದಿನಾಂಕ: ಸೆಪ್ಟೆಂಬರ್ 4, 2015 |
1. ಪ್ರೊ ವಲೇರಿಯನ್ ರಾಡ್ರಿಗಸ್ ಐಸಿಎಸ್‍ಎಸ್‍ಆರ್ ನವದೆಹಲಿ 2. ಡಾ. ಶಿವರಾಂ ಶೆಟ್ಟಿ ಮಂಗಳೂರು ವಿ.ವಿ 3. ಡಾ. ಸದಾನಂದ, ಕುವೆಂಪು ವಿ.ವಿ 5. ಮೇರಿ ಜೋಸೆಫ್, ಪತ್ರಕರ್ತರು, ಬೆಂಗಳೂರು 6. ಡಾ ಮೇಟಿ ಮಲ್ಲಿಕಾರ್ಜುನ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ 7. ಡಾ. ಉದಯ ಕುಮಾರ, ಮಂಗಳೂರು ವಿ.ವಿ 8. ಡಾ. ರಾಜಾರಾಂ ತೋಳ್ಪಾಡಿ ಮಂಗಳೂರು ವಿ.ವಿ 9. ಡಾ.ಲತಾ ಪಂಡಿತ್ ಮಂಗಳೂರು ವಿ.ವಿ 10. ಪ್ರೊ.ಬಾಲಕೃಷ್ಣ ಶೆಟ್ಟಿ, ಎಸ್.ಡಿ.ಪಿ.ಟಿ ಪ್ರಥಮ ದರ್ಜೆ ಕಾಲೇಜು, ಕಟೀಲು 11. ಡಾ.ರವಿರಾಜ ಶೆಟ್ಟಿ, ಉಡುಪಿ |
‘ಸಮಾಜ ಸಂಶೋಧನೆ’ ಕುರಿತ 3 ದಿನಗಳ ರಾಜ್ಯಮಟ್ಟದ ಕಾರ್ಯಗಾರ ದಿನಾಂಕ 24,25,26 ಮಾರ್ಚ್ 2008 |
1. ಪ್ರೊ.ಬಿ ಸುರೇಂದ್ರ ರಾವ್, ಇತಿಹಾಸ ವಿಭಾಗ ಮಂಗಳೂರು ವಿ.ವಿ 2. ಪ್ರೋ ಚಿ. ಬೋರಲಿಂಗಯ್ಯ, ಕುಲಸಚಿವರು ಕನ್ನಡ ವಿ.ವಿ ಹಂಪಿ 3. ಪ್ರೊ ಕೆ. ರಾಘವೇಂದ್ರ ರಾವ್, ಧಾರವಾಡ 4. ಪ್ರೊ ಕೆ.ವಿ ನಾರಾಯಣ, ಕನ್ನಡ ವಿ.ವಿ ಹಂಪಿ 5. ಪ್ರೊ. ಹರೀಶ್ ರಾಮಾಸ್ವಾಮಿ ರಾಜ್ಯಶಾಸ್ತ್ರ ವಿಭಾಗ, ಕರ್ನಾಟಕ ವಿ.ವಿ. ಧಾರವಾಡ 6. ಪ್ರೊ.ಶ್ರೀಪತಿ ಕಲ್ಲೂರಾಯ ಮಂಗಳೂರು ವಿ.ವಿ 7. ಪ್ರೊ ಚಂದ್ರ ಪೂಜಾರಿ ಕನ್ನಡ ವಿ.ವಿ ಹಂಪಿ 8. ಡಾ. ನಯನರತ್ನ ವಿದ್ವಾಂಸರು |
‘ಸಮಾಜ ವಿಜ್ಞಾನ ಮತ್ತು ನಮ್ಮ ಸಂಸ್ಕøತಿ’ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಕಮ್ಮಟ ದಿನಾಂಕ: 09.04.2011 |
1. ಪ್ರೊ.ಜೆ.ಎಸ್ ಸದಾನಂದ ಕುವೆಂಪು ವಿ.ವಿ ಶಿವಮೊಗ್ಗ 2. ಡಾ.ಸಂತೋಷ, ಕುವೆಂಪು ವಿ.ವಿ, ಶಿವಮೊಗ್ಗ 3. ಡಾ. ಸಂದೀಪ ಕುವೆಂಪು ವಿ.ವಿ, ಶಿವಮೊಗ್ಗ |
ಮೂರು ದಿನದ ರಾಜ್ಯಮಟ್ಟದ ‘ಸಮಾಜ ಸಂಶೋಧನಾ ವಿಧಾನ’ ಕುರಿತಾದ ಕಮ್ಮಟ ದಿನಾಂಕ: 27, 28, 29 ಸೆಪ್ಟೆಂಬರ್ 2012 |
1. ಪ್ರೊ.ಆರ್ ಶಶಿಧರ, ಮಖ್ಯಸ್ಥರು, ಇಂಗ್ಲೀಷ್ ವಿಭಾಗ, ಮಂಗಳೂರು ವಿ.ವಿ 2. ಪ್ರೊ ಹಿ.ಚಿ. ಬೋರಲಿಂಗಯ್ಯ, ಉಪಕುಲಪತಿಗಳು ಕನ್ನಡ ವಿ.ವಿ ಹಂಪಿ 3. ಪ್ರೊ.ಚಂದ್ರಶೇಖರ ಟಿ.ಆರ್, ವಿಶ್ರಾಂತ ಪ್ರಾಧ್ಯಾಪಕರು, ಹಂಪಿ 4. ಡಾ. ಶೌಕತ್ ಅಜೀಂ ಕರ್ನಾಟಕ ವಿ.ವಿ ಧಾರವಾಡ. 5. ಡಾ. ಜನಾರ್ಧನ, ಕನ್ನಡ ವಿ.ವಿ ಹಂಪಿ 6. ಡಾ.ಶ್ರೀಪತಿ ಕಲ್ಲೂರಾಯ ಮಂಗಳೂರು ವಿ.ವಿ 7. ಡಾ. ಎ.ವಿ ನಾವಡ, ಕರ್ನಾಟಕ ಥಿಯಾಲಾಜಿಕಲ್ ಸಂಶೋಧನಾ ಕೇಂದ್ರ, ಮಂಗಳೂರು. 8. ಡಾ. ಸುರೇಂದ್ರ ರಾವ್, ವಿಶ್ರಾಂತ ಪ್ರಾಧ್ಯಾಪಕರು, ಮಂಗಳೂರು 9. ಡಾ.ಎಂ ಚಂದ್ರ್ರ ಪೂಜಾರಿ, ಕನ್ನಡ ವಿ.ವಿ 10. ಡಾ.ಕೃಷ್ಣ ಗೌಡ, ಮೈಸೂರು |
ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ವಿಷಯ: ಯಕ್ಷಗಾನ ಪ್ರಸಂಗ ಸಾಹಿತ್ಯ ಪರಂಪರೆ ಮತ್ತು ಪ್ರಯೋಗ ದಿನಾಂಕ:10.01.2015 |
1. ಡಾ.ಚಿನ್ನಪ್ಪ ಗೌಡ, ಮಂಗಳೂರು ವಿ.ವಿ 2. ಡಾ. ಶ್ರೀಧರ ಉಪ್ಪೂರ, ವಿಶ್ರಾಂತ ಪ್ರಾಧ್ಯಾಪಕರು, ಶ್ರೀ ಶಾರದಾ ಕಾಲೇಜು 3. ಡಾ. ತಾಳ್ತಜೆ ವಸಂತ ಕುಮಾರ ಮುಂಬಯಿ ವಿ.ವಿ 4. ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಉತ್ತರ ಕನ್ನಡ. |
ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕರಣ ವಿಷಯ: ಭಾರತದಲ್ಲಿ ಮಹಿಳಾ ಅಧ್ಯಯನ: ಇತ್ತೀಚಿನ ಒಲವುಗಳು ದಿನಾಂಕ: 03, 04 ಫೆಬ್ರವರಿ 2017 |
1. ಡಾ.ಬಿ.ಎನ್ ಸುಮಿತ್ರಾಬಾಯಿ ವಿಮರ್ಶಕಿ, ಬೆಂಗಳೂರು 2. ಡಾ.ರೇಖಾ ಬನ್ನಾಡಿ, ಕುಂದಾಪುರ 3. ಪ್ರೊ ಮೀನಾಕ್ಷಿ ರಾಮಚಂದ್ರ, ಮಂಗಳೂರು 4. ಡಾ.ಲತಾ ಎ ಮಂಗಳೂರು 5. ಡಾ. ಶುಭಾ ಮರವಂತೆ, ಶಿವಮೊಗ್ಗ 6. ಡಾ. ಗಾಯತ್ರಿ ನಾವಡ, ಕನ್ನಡ ವಿ.ವಿ ಹಂಪಿ 7. ಡಾ. ನಿಕೇತನ, ಉಡುಪಿ 8. ಡಾ. ಸುಮಾ ಯು, ಉಡುಪಿ 9. ಡಾ.ಪಾರ್ವತಿ ಜಿ ಐತಾಳ್, ಕುಂದಾಪುರ 10. ಡಾ. ಕಿಶೋರಿ ನಾಯಕ್, ಮಂಗಳೂರು ವಿ.ವಿ 11. ಪ್ರಮೀಳ ವಾಸ್, ಕೆದೂರು. |
ನಿವೃತ್ತಗೊಂಡ ಸಂಸ್ಥೆಯ ಬೋಧಕ ವೃಂದ.
1. ಪ್ರೊ. ಬಿ ವಾಸುದೇವ ವರ್ಣ (ಕನ್ನಡ ವಿಭಾಗ)
2. ಪ್ರೊ. ಎಸ್ ಶಿವರಾಮ ಶೆಟ್ಟಿ (ಪ್ರಾಂಶುಪಾಲರು ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರು)
3. ಪ್ರೊ. ಜೆ.ಎಮ್ ಚೂರಕ್ಕನ್(ಇಂಗ್ಲೀಷ್ ವಿಭಾಗ)
4. ಪ್ರೊ. ಗಣಪಯ್ಯ ಶೆಟ್ಟಿ (ಪ್ರಾಂಶುಪಾಲರು ಗ್ರೇಡ್-1 ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು)
5. ಪ್ರೊ.ಲೀಲಮ್ಮ ಕೆ.ಜೆ (ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು)
6. ಪ್ರೊ.ಲೀಲಾಮಣಿ (ಹಿಂದಿ ವಿಭಾಗದ ಮುಖ್ಯಸ್ಥರು)
7. ಶ್ರೀ ಎಸ್.ಎಮ್ ಶ್ಯಾನ್‍ಭೋಗ್ (ಹಿರಿಯ ಶ್ರೇಣಿ ದೈಹಿಕ ಶಿಕ್ಷಣ ನಿರ್ದೇಶಕರು)
8. ಪ್ರೊ. ಎನ್.ಕೆ ಕುರಿಯನ್ (ವಾಣಿಜ್ಯ ವಿಭಾಗದ ಮುಖ್ಯಸ್ಥರು)
9. ಪ್ರೊ.ಕೆ ಶಂಕರ ಜೊೈಸಾ (ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು)
10. ಪ್ರೊ.ವಾಸುದೇವ ರಾವ್ (ವಾಣಿಜ್ಯ ವಿಭಾಗ)
11. ಡಾ. ಕನರಾಡಿ ವಾದಿರಾಜ ಭಟ್ (ವಿಭಾಗ ಮುಖ್ಯಸ್ಥರು, ಕನ್ನಡ ವಿಭಾಗ)
12. ಡಾ. ಶ್ರೀಧರ ಉಪ್ಪೂರ (ಕನ್ನಡ ವಿಭಾಗದ ಮುಖ್ಯಸ್ಥರು)
13. ಮೇಜರ್ ಎಚ್ ಜಗದೀಶ್ (ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥರು)
14. ಪ್ರೊ ಎಮ್. ಚಂದ್ರಪ್ರಭ ಆರ್ ಹೆಗ್ಡೆ (ಪ್ರಾಂಶುಪಾಲರು ಗ್ರೇಡ್-1)
15. ಪ್ರೊ ಕೆ. ಚಂದ್ರಶೇಖರ ಶೆಟ್ಟಿ (ಸಹಪ್ರಾಧ್ಯಾಪಕರು, ಇತಿಹಾಸ ವಿಭಾಗ)
16. ಪ್ರೊ ಬಿ ಭಾಸ್ಕರ ಶೆಟ್ಟಿ (ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು)
17. ಪ್ರೊ. ಕೆ.ರಾಧಾಕೃಷ್ಣ ಶೆಟ್ಟಿ (ಪ್ರಾಂಶುಪಾಲರು ಮತ್ತುವಾಣಿಜ್ಯ ವಿಭಾಗದ ಮುಖ್ಯಸ್ಥರು)
18. ಪ್ರೊ/ಡಾ ಎಂ ದಿನೇಶ್ ಹೆಗ್ಡೆ (ಪ್ರಾಂಶುಪಾಲರು ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು)