ಶ್ರೀ ಶಾರದಾ ಕಾಲೇಜು, ಬಸ್ರೂರು

ಸುಸ್ವಾಗತ,

 ಶ್ರೀ ಕೆ.ರಾಧಾಕೃಷ್ಣ ಶೆಟ್ಟಿ, ಪ್ರಾಂಶುಪಾಲರು
ಶ್ರೀ ಶಾರದಾ ಕಾಲೇಜು, ಬಸ್ರೂರು ಉಡುಪಿ ಜಿಲ್ಲೆಯಲ್ಲಿ ಪ್ರತಿಷ್ಠಿತವಾದ ಉನ್ನತ ಶಿಕ್ಷಣ ವಿದ್ಯಾಸಂಸ್ಥೆಯಾಗಿದೆ. ಈ ಕಾಲೇಜು 1972ರಲ್ಲಿ ಶ್ರೀ ಶಾರದಾ ಕಾಲೇಜು ಟ್ರಸ್ಟ್‍ನಿಂದ ಸ್ಥಾಪಿತವಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆ ಒಳಪಟ್ಟಿದ್ದು, ಗ್ರಾಮೀಣ ಯುವ ಜನರಿಗೆ ಉನ್ನತ ಶಿಕ್ಷಣವನ್ನು ಒದಗಿಸುವ ಧ್ಯೇಯೋದ್ದೇಶದೊಂದಿಗೆ ರೂಪುಗೊಂಡಿದೆ. ಅಂದಿನಿಂದ ಇಂದಿನವರೆಗೆ ಈ ಕಾಲೇಜು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಉನ್ನತ ಮಟ್ಟದ ಶಿಕ್ಷಣ ಜೊತೆಗೆ ಆಧುನಿಕ ಜಗತ್ತನ್ನು ಎದುರಿಸುವಲ್ಲಿ ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಯು ಕಾರ್ಯ ನಿರ್ವಹಿಸಬೇಕೆಂಬುದು ಸಂಸ್ಥೆಯ ಸ್ಥಾಪಕರ ಪ್ರಮುಖ ಉದ್ದೇಶವಾಗಿದೆ.